ಫನ್‍ವಿಯಾಜಿನ್, ಡೆನಿಸ್ ಈವ್ಯನವಿಚ್
1745-92 ಪ್ರಾಚೀನ ಸಂಪ್ರದಾಯ ಯುಗದ ರಷ್ಯನ್ ನಾಟಕಕಾರ. ಅಂದಿನ ಹಾಸ್ಯನಾಟಕದ ನಿಯಮಗಳನ್ನು ಅನುಸರಿಸಿ ಈತ ಬರೆದ ಗದ್ಯನಾಟಕಗಳಲ್ಲಿ ದಿ ಬ್ರಿಗೇಡಿಯರ್ ಜನರಲ್ ಮತ್ತು ದಿ ಮೈನರ್ ಪ್ರಸಿದ್ಧ ಕೃತಿಗಳು. ಹಳ್ಳಿಗಾಡಿನ ಅವಿದ್ಯಾವಂತ ಮೇಲ್ತರಗತಿಯವರನ್ನು ಎರಡನೆಯ ಕೃತಿಯಲ್ಲಿ ಹಾಸ್ಯಮಾಡಿದ್ದಾನೆ. ರಷ್ಯನ್ ಸಾಹಿತ್ಯದಲ್ಲಿ ಉತ್ತಮ ಪಾತ್ರ ಸೃಷ್ಟಿ ಮಾಡಿರುವುದನ್ನು ಇವನ ಕೃತಿಗಳಲ್ಲಿ ಮೊಟ್ಟಮೊದಲು ಕಾಣಬಹುದು. ಇವುಗಳಲ್ಲಿ ಸಂಭಾಷಣೆ ಸಹಜವೂ ಜೀವಂತವೂ ಆಗಿದೆ.
		(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ